ಬಾಲಂಗೋಚಿ
ನಾ ಬಂದ ಕಾಲ ನನಗರಿವಿಲ್ಲ
ಆಡಿದ ಆಟ ಮರೆತಿಲ್ಲ
ಮುಂಜಾನೆ ಎದ್ದು ರೊಟ್ಟಿ ತಿಂದು
ಹಾರಿಸಿದ ಗಾಳಿಪಟದ
ನೆನಪಿನ ಬಾಲಂಗೋಚಿ ಅಳಿದಿಲ್ಲ
ನಿನ್ನ ಕಣ್ಣಿನಲ್ಲಿ ಕಂಡ ಪ್ರೀತಿ ಮಾಸಿಲ್ಲ
ಸ್ಪರ್ಶದ ಸವಿ ಮಾಗಿಲ್ಲ
ಜೊತೆಯಾಗಿ ಆಡಿದ ಮಾತು ಮರೆತಿಲ್ಲ
ನಿನ್ನೊಲುಮೆಯ ಮುತ್ತು ಜಿನುಗಿಲ್ಲ
ಗೆಳತಿ ನೀ ನನ್ನ ಬಾಳ ಸಂಗಾತಿಯಾಗಿ ಉಳಿದುಬಿಟ್ಟೆಯಲ್ಲ
ನೀನಿಲ್ಲದ ಮುಪ್ಪು ನನಗೆ ಇಷ್ಟವಿಲ್ಲ
ಅದನ್ನು ನೆನೆಯೊ ಯೋಚನೆ ಈಗ ನನಗಿಲ್ಲ
ನೀ ಇಲ್ಲದ್ದಿದ್ದರೂ ನಿನ್ನ ನೆನಪು ನನಗಿದೆಯೆಲ್ಲ
ಬಲು ಬೇಗ ನಾ ಬಂದು ನಿನ್ನಲ್ಲೆ ಸೇರುವೆನಲ್ಲ
ನಮ್ಮಿಬ್ಬರ ಜೊತೆಯ ಬಾಲಂಗೋಚಿ ಉಳಿದುಬಿಟ್ಟಿದೆಯಲ್ಲ..!
ತಂಗಾಳಿ ಜೊತೆ ಬಾಲಂಗೋಚಿ ಹಾರಿ ಬಂತು..
ReplyDeleteಚೆನ್ನಾಗಿದೆ ನಿಮ್ಮ ಬಾಲಂಗೋಚಿ ಕವಿತೆ..
ನಿಮ್ಮ ಬಾಲಂಗೋಚಿ ಹೇಗಿರತ್ತೋ.. ಕಾದು ನೋಡೋಣ.. :)
ನಾನು ಕಾಯ್ತ ಇದಿನಿ :)
ReplyDeleteI like the first paragraph of this poem; and it tries to balance the picture which is overwhelmingly compelling. Also, at first glance I thought that there is a stanza dwelling on each frame of the scene.
ReplyDeleteNice
ReplyDelete