Posts

Showing posts from June, 2007

ಪಿಸುಮಾತು

Image
ಕಣ್ಣಿಗೆ ಕಣ್ಣನಿರಿಸಿ ಮೊಗ್ಗಾದ ತುಟಿಗಳ ಅರಳಿಸಿ ತುಟಿಗಳ ಹೊಲಿಸಿ ಉಸಿರು ಕಟ್ಟಿ ಮುತ್ತನಿಟ್ಟು ಕಚ್ಚಿ ಕೆಂಪಾಗಿಸಿ ಬರ ಸೆಳೆದು ಆಲಂಗಿಸಿ ಅಪ್ಪಿ ಮುದ್ದಾಡಿ ಎದೆಗೆ ಎದೆಯನಿರಿಸಿ ಕಿವಿ ಕಚ್ಚಿ ಉಸಿರು ಬಿಟ್ಟು ಮೀಟಿ ಮುದ ನೀಡಿ ಮೈ ಭಾರ ಹೊತ್ತು ಮೈ ಮರಗಟ್ಟಿ ಬಿಟ್ಟು ಚಳಿಯಲ್ಲೂ ಬೆವರಿ ಬೆವರಿನಲ್ಲಿ ಮಿಂದು ಆಲಂಗಿಸಿ ಮಲಗಿದ ಮೌನ ಭಾವನೆಗಳ ಓಕಳಿ ಎರಡು ಹೃದಯಗಳ ಪಿಸುಮಾತು.. Image flicked from http://www.art.com/

ಸ್ನೇಹ

Image
ಸ್ನೇಹ ಒಂದು ಕವನ ನೂರೊಂದು ಭಾವನೆಗಳ ಮಿಲನ ಬದುಕಿನ ಜಂಜಾಟದಿ ಬೇಸತ್ತ ಮುಗ್ಧ ಮನಸಿಗೆ ತಂಪೆರೆವ ಅಮೃತ ಸಿಂಚನ..

ಬಾಲಂಗೋಚಿ

Image
ನಾ ಬಂದ ಕಾಲ ನನಗರಿವಿಲ್ಲ ಆಡಿದ ಆಟ ಮರೆತಿಲ್ಲ ಮುಂಜಾನೆ ಎದ್ದು ರೊಟ್ಟಿ ತಿಂದು ಹಾರಿಸಿದ ಗಾಳಿಪಟದ ನೆನಪಿನ ಬಾಲಂಗೋಚಿ ಅಳಿದಿಲ್ಲ ನಿನ್ನ ಕಣ್ಣಿನಲ್ಲಿ ಕಂಡ ಪ್ರೀತಿ ಮಾಸಿಲ್ಲ ಸ್ಪರ್ಶದ ಸವಿ ಮಾಗಿಲ್ಲ ಜೊತೆಯಾಗಿ ಆಡಿದ ಮಾತು ಮರೆತಿಲ್ಲ ನಿನ್ನೊಲುಮೆಯ ಮುತ್ತು ಜಿನುಗಿಲ್ಲ ಗೆಳತಿ ನೀ ನನ್ನ ಬಾಳ ಸಂಗಾತಿಯಾಗಿ ಉಳಿದುಬಿಟ್ಟೆಯಲ್ಲ ನೀನಿಲ್ಲದ ಮುಪ್ಪು ನನಗೆ ಇಷ್ಟವಿಲ್ಲ ಅದನ್ನು ನೆನೆಯೊ ಯೋಚನೆ ಈಗ ನನಗಿಲ್ಲ ನೀ ಇಲ್ಲದ್ದಿದ್ದರೂ ನಿನ್ನ ನೆನಪು ನನಗಿದೆಯೆಲ್ಲ ಬಲು ಬೇಗ ನಾ ಬಂದು ನಿನ್ನಲ್ಲೆ ಸೇರುವೆನಲ್ಲ ನಮ್ಮಿಬ್ಬರ ಜೊತೆಯ ಬಾಲಂಗೋಚಿ ಉಳಿದುಬಿಟ್ಟಿದೆಯಲ್ಲ..!